ಮ್ಯಾಸ್ಕಲೈನ್, ನೆವಿಲ್ 1732 - 1811. ಇಂಗ್ಲೆಂಡಿನ ಖಗೋಳವಿe್ಞÁನಿ. ಲಂಡನ್ನಿನಲ್ಲಿ ಜನನ (6 ಅಕ್ಟೋಬರ್ 1732). ಪ್ರಾಚೀನ ವಿಲ್ಟ್‍ಷೈರ್ ಮನೆತನದ ಕೊನೆಯ ಉತ್ತರಾಧಿಕಾರಿ. ಇವನ ವಿದ್ಯಾಭ್ಯಾಸ ವೆಸ್ಟ್‍ಮಿನ್‍ಸ್ಟರ್ ಶಾಲೆಯಲ್ಲಿ ನಡೆಯಿತು. ವೆಸ್ಟ್‍ಮಿನ್‍ಸ್ಟರ್ ಶಾಲೆಯಲ್ಲಿದ್ದಾಗ ಈತನಿಗೆ ಮಹಾಕಾವ್ಯಗಳ ಬಗ್ಗೆ ಒಳ್ಳೆಯ ಬುನಾದಿ ಒದಗಿತು. ರಜೆಯ ದಿವಸಗಳಲ್ಲಿ ಬರೆವಣಿಗೆ ಮತ್ತು ಅಂಕಗಣಿತಗಳಲ್ಲಿ ಈತನಿಗೆ ವಿಶೇಷ ಪಾಠ ಹೇಳಿಕೊಡಲಾಗುತ್ತಿತ್ತು. ದೃಗ್ಗ್ವಿe್ಞÁನ ಮತ್ತು ಖಗೋಳವಿe್ಞÁನಗಳಲ್ಲಿ ಇವನಿಗೆ ಅಮಿತಾಸಕ್ತಿ. ಇದರಿಂದ ಗಣಿತವನ್ನು ಅಭ್ಯಸಿಸುವುದು ಸಾಧ್ಯವಾಯಿತು.  ಜ್ಯಾಮಿತಿ ಮತ್ತು ಬೀಜಗಣಿತದ ಮೂಲತತ್ತ್ವಗಳನ್ನು ಕೆಲವೇ ತಿಂಗಳುಗಳಲ್ಲಿ ಕರಗತ ಮಾಡಿಕೊಂಡು ಈ e್ಞÁನವನ್ನು ನೈಸರ್ಗಿಕ ತತ್ತ್ವಶಾಸ್ತ್ರದ ಬೇರೆ ಬೇರೆ ಅಂಶಗಳನ್ನು ಇತರ ಅಧ್ಯಯನಗಳಿಗೆ ವಿಶೇಷವಾಗಿ ಬಲವಿe್ಞÁನ, ವಾಯುಯಂತ್ರವಿe್ಞÁನ ಮತ್ತು ಜಲಸ್ಥಿತಿವಿe್ಞÁನಗಳ ಅಧ್ಯಯನಗಳಿಗೆ ಅನ್ವಯಿಸಿಕೊಂಡ. ಈ ಬಗ್ಗೆ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1754ರಲ್ಲಿ ಅಲ್ಲಿಯ 7 ನೆಯ ರ್ಯಾಂಗ್ಲರ ಆಗಿ ಪದವೀಧರನಾದ.  ಕ್ರೈಸ್ತ ಧರ್ಮದ ಕಟ್ಟಳೆಯಂತೆ ವಿಧಿಪೂರ್ವಕವಾಗಿ ಸೇವೆ ನಡೆಸಲು ಇವನನ್ನು ನೇಮಿಸಲಾಯಿತು (1755).  ಹೀಗಾಗಿ ಲಂಡನ್ನಿನ ಸಮೀಪದ ಚರ್ಚೊಂದರಲ್ಲಿ ಈತ ಉಪಪಾದ್ರಿಯಾಗಿ ನೇಮಕಗೊಂಡ. ಈ ಕೆಲಸದಲ್ಲಿ ಇದ್ದು ಜೀವನ ನಡೆಸುವುದಕ್ಕೆ ಬದಲು ತನ್ನ ವಿರಾಮದ ವೇಳೆಯನ್ನು ಲಂಡನ್ನಿನ ಆಸ್ಥಾನ ಖಗೋಳ ವಿe್ಞÁನಿಯಾಗಿದ್ದ ಜೇನ್ಸ್ ಬ್ರಾಡ್ಲೇ ಎಂಬವನಿಗೆ ಸಹಾಯಕನಾಗಿದ್ದುಕೊಂಡೇ ಖಗೋಳವಿe್ಞÁನದ ಅಧ್ಯಯನದಲ್ಲಿ ವಿಶೇಷ ಅಭಿರುಚಿ ತಳೆದುಕೊಂಡ.  ವಕ್ರೀಭವನವನ್ನು ಕುರಿತಂತೆ ಕೋಷ್ಟಕಗಳ ರಚನೆಯಲ್ಲಿ ಈತನನ್ನು ಕೇಂಬ್ರಿಜ್, ಟ್ರಿನಿಟಿ ಬಳಿಕ ರಾಯಲ್ ಸೊಸೈಟಿಯ ಫೆಲೋ ಆಗಿಯೂ (1759) ಚುನಾಯಿಸಲಾಯಿತು. 

ಬ್ರಾಡ್ಲೇಯ ಶಿಫಾರಸ್ಸಿನ ಮೇರೆಗೆ ಬ್ರಿಟಿಷ್ ಸರ್ಕಾರ ಮ್ಯಾಸ್ಕಲೈನನ್ನು 1761ರಲ್ಲಿ ಘಟಿಸಲಿದ್ದ ಶುಕ್ರಗ್ರಹದ ಸಂಕ್ರಮಣವನ್ನು ವೀಕ್ಷಿಸಲು ಸೇಂಟ್ ಹೆಲೀನದ್ವೀಪಕ್ಕೆ ಕಳುಹಿಸಿತು. ಈ ಘಟನೆಯಿಂದ ಸೂರ್ಯ ಭೂಮಿಯ ನಡುವಿನ ದೂರವನ್ನು ಗಣಿಸುವುದು ಸಾಧ್ಯವಾಯಿತು. ಆದರೆ ಗಗನದಲ್ಲಿ ಮೋಡಗಳು ಮುಸುಕಿಕೊಂಡು ವೀಕ್ಷಣೆ ಸಾಧ್ಯವಾಗಲಿಲ್ಲ. ಇದಲ್ಲದೆ ಮಹಾಶ್ವಾನ(ಸಿರಿಯಸ್) ನಕ್ಷತ್ರದ ಯಾಮ್ಯೋತ್ತರ ಖಮಧ್ಯ ದೂರದ ವೀಕ್ಷಣೆಗಳಲ್ಲಿಯ ತಪ್ಪಿನಿಂದಾಗಿಯೂ (ಇದಾದದ್ದು ಖಮಧ್ಯ ಉಪಕರಣವೊಂದನ್ನು ಸರಿಯಾಗಿ ನೇತುಹಾಕದಿದ್ದುದರ ಸಲುವಾಗಿ) ಅಲ್ಪ ಆದರೆ ಗಣನೀಯವಾದ ದೃಗಂತರವನ್ನು ಅಳೆಯುವುದೂ ಈತನಿಗೆ ಸಾಧ್ಯವಾಗಲಿಲ್ಲ. ಸೇಂಟ್ ಹೆಲೀನ ದ್ವೀಪಕ್ಕೆ ಸಾಗುವಾಗ ಮಾರ್ಗ ಮಧ್ಯದಲ್ಲೇ ಚಂದ್ರನ ಸ್ಥಾನ, ಗತಿಗಳನ್ನು ವೀಕ್ಷಿಸುವುದರ ಮೂಲಕ ಸ್ಥಳೀಯ ರೇಖಾಂಶವನ್ನು ಗಣಿಸಲು ಯುಕ್ತ ಪ್ರಯೋಗಗಳನ್ನು ನಡೆಸಿದ. ಲಭಿಸಿದ ಫಲಿತಾಂಶಗಳನ್ನು ಕ್ರೋಡೀಕರಿಸಿ 'ದಿ ಬ್ರಿಟಿಷ್ ಮ್ಯಾರಿನರ್ಸ್ ಗೈಡ್ ಎಂಬ ಗ್ರಂಥವನ್ನು ಪ್ರಕಟಿಸಿದ (1763). ಸಮುದ್ರದ ಮೇಲೆ ಸ್ಥಳೀಯ ರೇಖಾಂಶವನ್ನು ಲೆಕ್ಕಿಸುವ ಯಾವುದೇ ವ್ಯಕ್ತಿಗೆ/ವ್ಯಕ್ತಿಗಳಿಗೆ ಅದರೂ ದೊಡ್ಡ ಮೊತ್ತದ ಸಂಸದೀಯ ಮೊಬಲಗು ನೀಡಲಾಗುತ್ತದೆ ಎಂಬ ಘೋಷಣೆಗೆ ಈತನೂ ತನ್ನ ಅರ್ಜಿಯನ್ನು ಹಾಕಿಕೊಂಡಿದ್ದ.  ಅದರ ಪುಷ್ಟಿಗಾಗಿ ಟೋಬಿಯಾಸ್ ಮೇಯರ್ ಎಂಬುವನ ಚಾಂದ್ರ ಕೋಷ್ಟಕವನ್ನೇ ಬಳಸಿಕೊಂಡು ಅರ್ಜಿಯನ್ನು 1755ರಲ್ಲಿ ಲಂಡನ್ನಿಗೆ ರವಾನಿಸಿದ. ಚಾಂದ್ರದೂರ ಮತ್ತು ಖಗೋಳೀಯ ಔನತ್ಯಗಳ ಅಗತ್ಯ ಕೋನೀಯಮಾಪನೆಗಾಗಿ 1731ರಲ್ಲಿ ಜಾನ್ ಹ್ಯಾಡ್ಲೀ ಎಂಬವ ಉಪಜ್ಞಿಸಿದ ಪ್ರರೂಪದ ಪ್ರತಿಫಲನಕಾರಿ ಕ್ವಾಂಡ್ರೆಂಟ್ ಉಪಕರಣವನ್ನೇ ಬಳಸಲಾಯಿತು. ತನ್ನ ದಿ ಬ್ರಿಟಿಷ್ ಮ್ಯಾರಿನರ್ಸ್ ಗೈಡ್ ಪುಸ್ತಕದಲ್ಲಿ ಈ ಉಪಕರಣದ ಬಳಕೆ ಮತ್ತು ಅದರ ಪರಿಷ್ಕಾರ ಹಾಗೂ ರೇಖಾಂಶದ ಗಣನೆಯಲ್ಲಿ ಚಾಂದ್ರಕೋಷ್ಟಕದ ಬಳಕೆ ಇತ್ಯಾದಿಗಳ ಬಗ್ಗೆ ವಿವರಣಾತ್ಮಕ ನಿರ್ದೇಶನಗಳನ್ನು ಮ್ಯಾಸ್ಕಲೈನ್ ನೀಡಿದ್ದ.

ಈತ 1764ರಲ್ಲಿ ಬಾರ್ಬಡೋಸಿನ ದ್ವೀಪದ ರಾಜಧಾನಿ ಬ್ರಿಟನ್ ನಗರಕ್ಕೆ ತನ್ನ ಎರಡನೆಯ ಸಮುದ್ರಯಾನ ಕೈಗೊಂಡ. ರೇಖಾಂಶವನ್ನು ನಿರ್ಧರಿಸಲು, ವ್ಯತಿರಿಕ್ತ ಕಾಲಮಾಪಕ ವಿಧಾನದ ನಿಖರತೆಯನ್ನು ನಿಷ್ಕರ್ಷಿಸಲು ಈ ಯಾನವನ್ನೂ ಕೈಗೊಂಡ ಮ್ಯಾಸ್ಕಲೈನ್. ಈ ವಿಧಾನದ ಆದ್ಯಪ್ರವರ್ತಕ ಜಾನ್ ಹ್ಯಾರಿಸನ್ ಎಂಬವ. ಸಂಸದೀಯ ಬಹುಮಾನ ಪ್ರಕಟಗೊಳ್ಳುವುದರ ಮುಂಚೆಯೇ ಈ ವಿಧಾನದ ನಿಖರತೆ ಸ್ಥಿರಪಡಬೇಕಾಗಿತ್ತು.  ಆದಕಾರಣ ಬಾರ್ಬಡೋನಿನ ರೇಖಾಂಶವನ್ನು ಗಣಿಸಿ ಸ್ಥಿರಪಡಿಸುವುದು ಮ್ಯಾಸ್ಕಲೈನನಿಗೆ ಅತ್ಯಗತ್ಯವಾಯಿತು.  ರೇಖಾಂಶವನ್ನು ನಿರ್ಣಯಕ್ಕೆ ಎಂದೇ ನೇಮಕವಾಗಿದ್ದ ಮಂಡಲಿ ಮ್ಯಾಸ್ಕಲೈನನನ್ನು ಇನ್ನಿತರ ಎರಡು ರೇಖಾಂಶ ಮಾಪನ ವಿಧಾನಗಳ ತೌಲನಿಕ ಅಧ್ಯಯನಗೈಯ ಬೇಕೆಂದು ಆದೇಶಿಸಿತು. ಒಂದು, ಗುರುಗ್ರಹದ ಉಪಗ್ರಹಗಳ ವೀಕ್ಷಣೆಗೆ ಸಂಬಂಧಿಸಿದ್ದು; ಇನ್ನೊಂದು, ಚಂದ್ರಬಿಂಬದಿಂದ ಉಂಟಾಗುವ ತಾರಾಗ್ರಹಣಕ್ಕೆ ಸಂಬಂಧಿಸಿದ್ದು. ಇದಲ್ಲದೆ ಕ್ರಿಸ್ಟೋಫರ್ ಇರ್ವಿನ್ ಎಂಬವನೊಬ್ಬ ರೂಪಿಸಿದ್ದ ಸಾಗರ ಆಸನವೊಂದರ ಕಾರ್ಯಶೀಲತೆಯನ್ನು ಪರೀಕ್ಷಿಸುವಂತೆಯೂ ಇವನಿಗೆ ಆದೇಶ ನೀಡಲಾಗಿತ್ತು. ಈ ಆಸನ ಸಮುದ್ರಯಾನದ ಸಮಯದಲ್ಲಿ ನಡೆಸುವ ವೀಕ್ಷಣೆಗಳಿಗೆ ಅನುಕೂಲಕಾರಿಯಲ್ಲ ಎಂಬುದನ್ನು ಮ್ಯಾಸ್ಕಲೈನ್ ತಿಳಿಸಿದ. ಇಷ್ಟಾದರೂ ಸಂಸದೀಯ ಬಹುಮಾನದ ಮೊತ್ತ ಹ್ಯಾರಿಸನ್ ಮತ್ತು ಮೇಯರ್ ಅವರಿಗೇ ಸಲ್ಲತಕ್ಕದ್ದೆಂದು ರೇಖಾಂಶಮಂಡಲಿ ನಿರ್ಧರಿಸಿತು. ಆಗತಾನೇ ಆಸ್ಥಾನ ಖಗೋಳವಿe್ಞÁನಿಯಾಗಿ ನೇಮಕಗೊಂಡ (1765) ಮ್ಯಾಸ್ಕಲೈನ್ ಚಾಂದ್ರದೂರ ವಿಧಾನದ ಸಾಮಾನ್ಯ ಉಪಯುಕ್ತತೆಯನ್ನು ಪರೀಕ್ಷಿಸಲು ನಾಲ್ಕು ಮಂದಿ ನಾವಿಕ ಅಧಿಕಾರಿಗಳನ್ನು ನೇಮಿಸಿಕೊಂಡು 10 ಅಥವಾ 60 ಮೈಲುಗಳ ಅಂತರದಲ್ಲಿ ರೇಖಾಂಶಗಣನೆ ನಡೆಸಲು ಏರ್ಪಾಡು ಮಾಡಿದ. ಇದಲ್ಲದೆ ಅನುಷಂಗಿಕ ಕೋಷ್ಟಕ ಮತ್ತು ವಿವರಣೆಗಳನ್ನೊಳಗೊಂಡ ನಾವಿಕ ಪಂಚಾಂಗ (ನಾಟಿಕಲ್ ಆಲ್ಮನಾಕ್) ಒಂದನ್ನು ತಯಾರಿಸುವುದರಿಂದ ಚಾಂದ್ರದೂರ ವಿಧಾನದ ಉಪಯುಕ್ತತೆಯನ್ನು ವೃದ್ಧಿಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನೂ ಮುಂದಿಟ್ಟ ಈ ಎಲ್ಲ ಆಲೋಚನೆಗಳೂ ಗರಣೆಗಟ್ಟಿಕೊಂಡು ಇವನ ಸಮಗ್ರ ಪಂಚಾಂಗ ರೂಪದ ನಾಟಿಕಲ್ ಆಲ್ಮನಾಕ್ ಎಂಬ ವಾರ್ಷಿಕ ಪತ್ರಿಕೆಯ ಮೊದಲ ಸಂಪುಟ ರೂಪುಗೊಂಡು ಪ್ರಕಟವಾಯಿತು (1766). ಇವುಗಳಲ್ಲದೆ ಮೇಯರನ ಚಾಂದ್ರಸಿದ್ಧಾಂತ ಗ್ರಂಥದ ಮುದ್ರಣ ಹಾಗೂ ಪ್ರಕಟಣೆಯ (1767) ಹೊಣೆಗಾರಿಕೆಯನ್ನೂ ಹೊತ್ತುಕೊಂಡ. ವೀಕ್ಷಿತ ಚಾಂದ್ರದೂರಗಳಿಂದ ಖಗೋಳೀಯ ವಕ್ರೀಭವನ ಮತ್ತು ದೃಗಂತರ ಪರಿಣಾಮಗಳನ್ನು ತೆಗೆದುಹಾಕುವ ಸಲುವಾಗಿಯೇ ರೂಪಿತವಾದ ರಿಕ್ವಿಸಿಟ್ ಟೇಬಲ್ಸ್ (1767) ಎಂಬ ಗ್ರಂಥವನ್ನು ರಚಿಸಿದ. ನಾಟಿಕಲ್ ಆಲ್ಮನಾಕನ್ನು ಗುಣಿಸುವವರ ಹಾಗೂ ಪರಿಶೋಧಿಸುವವರ ಕೆಲಸಗಳ ಮೇಲ್ವಿಚಾರಣೆಯನ್ನು ತನ್ನ ಅಂತಿಮ ದಿನದ ತನಕವೂ ನಡೆಸುತ್ತಿದ್ದ. ಈ ಕಾಲಿಕ ಇಂದಿಗೂ ಖಗೋಳವಿe್ಞÁನಕ್ಕೆ ಮ್ಯಾಸ್ಕಲೈನನ ಮಹತ್ತರ ಕೊಡುಗೆಯಾಗಿದೆ.

ತೂಗು ಗುಂಡಿನ (ಸರಳ ಲೋಲಕ) ಸಹಾಯದಿಂದ ಭೂಮಿಯ ಸಾಂದ್ರತೆಯನ್ನು ನಿಷ್ಕರ್ಷಿಸುವ ಪ್ರಯೋಗವೆಂದರ ಬಗ್ಗೆ ರಾಯಲ್ ಸೊಸೈಟಿಗೆ ಸೂಚಿಸಿದ.  ಎರಡು ವರ್ಷಗಳ ಬಳಿಕ ಸ್ಕಾಟ್‍ಲೆಂಡಿನ ನಾರ್ತ್‍ಪರ್ತ್‍ಪೈರಿನಲ್ಲಿಯ ಸ್ಕೀ ಬೇಲಿಯಾನ್ ಪರ್ವತದ ಮೇಲೆ ಸ್ವತಃ ತಾನೆ ನಿಂತ ಪ್ರಯೋಗ ನಡೆಸಿ ಭೂಮಿಯ ಸಾಂದ್ರತೆ 4.5 ಎಂದು ನಿರ್ಧರಿಸಿದ. ಕಾಲನಿಷ್ಕರ್ಷೆಯ ವಿಚಾರವಾಗಿ ಮಾಪನೆಯನ್ನು ಸೆಕೆಂಡಿನ ಹತ್ತನೆಯ ಒಂದು ಭಾಗದಷ್ಟರ ನಿಖರತೆಯನ್ನು ಸಾಧಿಸಿದವ ಪ್ರಥಮತಃ ಈತನೇ.

ಮ್ಯಾಸ್ಕಲೈನ್ 1811 ಫೆಬ್ರುವರಿ 9 ರಂದು ಗ್ರೀನ್‍ವಿಚ್‍ನಲ್ಲಿ ಕಾಲವಾದ.
					  (ಡಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ